ಪ್ರಸ್ತುತ ಶಾಪಿಂಗ್ ಲ್ಯಾಂಡ್‌ಸ್ಕೇಪ್‌ನಲ್ಲಿ, ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ನೀವು ಅಲ್ಲಿ ಲಭ್ಯವಿರುವುದಕ್ಕೆ ಮಾತ್ರ ಸೀಮಿತವಾಗಿರುತ್ತೀರಿ. ಬೇರೆ ಆಯ್ಕೆಗಳನ್ನು ಪ್ರವೇಶಿಸಲು, ಮತ್ತೆ ನೀವು ಹೆಚ್ಚುವರಿ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳನ್ನು ಎಕ್ಸಪ್ಲೋರ್ ಮಾಡಬೇಕು. ONDC ನೆಟ್‌ವರ್ಕ್ ನಿಮಗೆ ಅತ್ಯದ್ಭುತವಾದ ಬದಲಾವಣೆಯನ್ನು ತರುತ್ತದೆ ಅಥವಾ ಇದನ್ನು ನಾವು ಶಾಪಿಂಗ್‌ನ ಭವಿಷ್ಯ ಎಂದು ಕರೆಯುತ್ತೇವೆ!
ಅನ್ ಬಂಡಲ್ಡ್. ಟ್ರಾನ್ಸ್ಪರೆಂಟ್. ಓಪನ್.
ಓಪನ್ ನೆಟ್‌ವರ್ಕ್ ಟೆಕ್ನಾಲಜಿಯ ಮೂಲಕ ಎಲ್ಲಾ ಪ್ಲ್ಯಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುತ್ತದೆ, ಎಲ್ಲಾ ಖರೀದಿದಾರರು ಮತ್ತು ಮಾರಾಟಗಾರರು ಅವರು ಯಾವ ಅಪ್ಲಿಕೇಶನ್‌ನಲ್ಲಿದ್ದರೂ ಸಹ ಪರಸ್ಪರ ವಹಿವಾಟು ನಡೆಸುತ್ತಾರೆ. ಈಗ, ನೀವು ಮಾರಾಟಗಾರರ ಸಂಪೂರ್ಣ ಆಯ್ಕೆಯಿಂದ ಮತ್ತು ನೆಟ್‌ವರ್ಕ್‌ನಲ್ಲಿ ಯಾವುದೇ ಅಪ್ಲಿಕೇಶನ್ ಮೂಲಕ ಲಭ್ಯವಿರುವ ಉತ್ಪನ್ನಗಳಿಂದ ಆಯ್ಕೆ ಮಾಡಬಹುದು - ಈಗ ಎಲ್ಲವೂ ಒಂದೇ ಮತ್ತು ಏಕೀಕೃತ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ.
More
ONDC ನೆಟ್‌ವರ್ಕ್ ಮೂಲಕ ಶಾಪಿಂಗ್ ಮಾಡುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಏನು?
- ಖರೀದಿದಾರ ಅಪ್ಲಿಕೇಶನ್‌ಗಳು ಎಂದು ಕರೆಯಲ್ಪಡುವ ಯಾವುದಾದರೂ ಮಲ್ಟಿಪಲ್ ಶಾಪಿಂಗ್ ಅಪ್ಲಿಕೇಶನ್‌ಗಳಿಂದ ಆಯ್ಕೆ ಮಾಡಲು ನಿಮಗೆ ಪೂರ್ಣ ಸ್ವಾತಂತ್ರ್ಯವಿದೆ. ಈ ಅಪ್ಲಿಕೇಶನ್‌ಗಳಲ್ಲಿ ಯಾವುದಾದರೂ ಒಂದರ ಮೂಲಕ, ನೆಟ್‌ವರ್ಕ್‌ನಲ್ಲಿ ಲಭ್ಯವಿರುವ ಉತ್ಪನ್ನಗಳು ಮತ್ತು ಸೇವೆಗಳ ಸಂಪೂರ್ಣ ಸ್ಪೆಕ್ಟ್ರಮ್ ಅನ್ನು ನೀವು ಪ್ರವೇಶಿಸಬಹುದು. ಅವು ಅನುಭವದಲ್ಲಿ ಭಿನ್ನವಾಗಿರುವುದರಿಂದ ನಿಮ್ಮ ಆದ್ಯತೆಗಳಿಗೆ ಸೂಕ್ತವಾದುದನ್ನು ನೀವು ಆಯ್ಕೆ ಮಾಡಬಹುದು.
- ನೆಟ್‌ವರ್ಕ್ 7.75+ Lakh ಕ್ಕೂ ಹೆಚ್ಚು ಮಾರಾಟಗಾರರು/ಸೇವಾ ಪೂರೈಕೆದಾರರನ್ನು ಹೊಂದಿದ್ದು, 12 ಉತ್ಪನ್ನ ವರ್ಗಗಳು ಪ್ರತಿ ವಾರ ಸಾವಿರಾರು ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಮುಖ್ಯವಾಗಿ, ನೆಟ್‌ವರ್ಕ್‌ನ ಈ ಆರಂಭಿಕ ಹಂತದಲ್ಲಿ, ಎಲ್ಲಾ ಅಪ್ಲಿಕೇಶನ್‌ಗಳು ಪ್ರತಿಯೊಂದು ಉತ್ಪನ್ನ ಮತ್ತು ಸ್ಥಳವನ್ನು ಸರಿಹೊಂದಿಸುವುದಿಲ್ಲ ಎಂಬುದನ್ನು ಗಮನಿಸುವುದು ಅವಶ್ಯಕವಾಗಿದೆ. ನೆಟ್‌ವರ್ಕ್ ವಿಸ್ತರಣೆಯು ಮುಂದುವರಿದಂತೆ, ಈ ಮಿತಿಯು ಶೀಘ್ರದಲ್ಲೇ ಹಿಂದಿನ ವಿಷಯವಾಗಲಿದ್ದು, ಉತ್ಪನ್ನ ಅಥವಾ ಸೇವೆಯ ಯಾವುದೇ ವರ್ಗವನ್ನು ಎಕ್ಸಪ್ಲೋರ್ ಮತ್ತು ಖರೀದಿಸಲು ನಿಮ್ಮ ಯಾವುದೇ ಆದ್ಯತೆಯ ಅಪ್ಲಿಕೇಶನ್‌ಗಳನ್ನು ನೀವು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ಪ್ರಾರಂಭಿಸಲು ನಿಮ್ಮ ಆಸಕ್ತಿಯ ಕೆಟಗರಿಯನ್ನು ಆಯ್ಕೆಮಾಡಿ, ಮತ್ತು ONDC ನೆಟ್‌ವರ್ಕ್‌ನಲ್ಲಿ ನಿರ್ದಿಷ್ಟ ವರ್ಗದ ಮಾರಾಟಗಾರರಿಂದ ಶಾಪಿಂಗ್ ಮಾಡಲು ಯಾವ ಖರೀದಿದಾರ ಅಪ್ಲಿಕೇಶನ್‌ಗಳು ನಿಮಗೆ ಸಹಾಯ ಮಾಡಬಹುದು ಎಂಬುದನ್ನು ನಾವು ನಿಮಗೆ ತೋರಿಸುತ್ತೇವೆ.
ನೀವು ಶಾಪಿಂಗ್ ಹೇಗೆ ಮಾಡುತ್ತೀರಿ ಎಂದು ಮರುಚಿಂತನೆ ಮಾಡಿ
ನೆಟ್‌ವರ್ಕ್ ಪಕ್ವವಾಗುತ್ತಿದ್ದಂತೆ, ನೆಟ್‌ವರ್ಕ್‌ನಿಂದ ಹೆಚ್ಚಿನ ಕೆಟಗರಿಗಳು ಮತ್ತು ಡೊಮೇನ್‌ಗಳನ್ನು ಸೇರಿಸಲಾಗುತ್ತದೆ ಮತ್ತು ONDC ಪ್ರೋಟೋಕಾಲ್ ಕಂಪ್ಲೈಂಟ್ ಖರೀದಿದಾರ ಅಪ್ಲಿಕೇಶನ್‌ಗಳಿಂದ ಸಕ್ರಿಯಗೊಳಿಸಲಾಗುತ್ತದೆ.